
ನದಿಯಲ್ಲಿ ಮುಳಗಿ ತಾಯಿ-ಮಗ ಸಾವು ಸಂಕೇಶ್ವರ ಪಟ್ಟಣದಲ್ಲಿ ಹೃದಯವಿದ್ರಾವಕ ಘಟನೆ
ಬೆಳಗಾವಿ :ಸಂಕೇಶ್ವರ ಪಟ್ಟಣದ ಹಿರಣ್ಯಕೇಶಿ ನದಿ ನೀರಿಗೆ ಬಿದ್ದಿರುವ ತಾಯಿ ಶವವು ಮಂಗಳವಾರ ರಾತ್ರಿ ದೊರೆತಿದ್ದು, ಮಗನ ಶವಕ್ಕಾಗಿ ಎರಡನೇ ದಿನವಾದ ಬುಧವಾರ ಕೂಡಾ ಶೋಧ ಕಾರ್ಯ ಮುಂದುವರಿದಿದೆ. ಆದರೆ ಕುಟುಂಬಕ್ಕೆ ಒಬ್ಬನೆ ಮಗನಾಗಿ ಕುಟುಂಬದ ವಂಶವನ್ನು ಬೆಳೆಸಬೇಕಾಗಿದ್ದ ಮಗನ ಸಾವಿನಿಂದ ನಾಗರಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ನೀರಿನಲ್ಲಿ ಬಿದ್ದವರನ್ನು ಲಕ್ಷ್ಮೀ ಸುಧಾಕರ ಕುಟೋಳಿ (27) ಹಾಗೂ ಸುಪ್ರೀತ ಸುಧಾಕರ ಕುಟೋಳಿ(10) ಇವರಿಬ್ಬರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇವರು ಸಂಕೇಶ್ವರದ ಹನುಮಾನ ನಗರ ನಿವಾಸಿಗಳಾಗಿದ್ದಾರೆ. ಪತಿ ಸುಧಾಕರ ಈತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ.
ಇವರಿಬ್ಬರು ಮಂಗಳವಾರ ಮಧ್ಯಾಹ್ನ ಹಿರಣ್ಯಕೇಶಿ ನದಿ ನೀರಲ್ಲಿ ಮುಳುಗಿದ್ದಾರೆ ಎಂದು ತಿಳಿದಿದೆ. ನೀರಿಗೆ ಬಿದ್ದು ಎರಡನೇ ದಿನವಾದ ಬುಧವಾರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೊಲೀಸರು ಬೋಟ್ ಮೂಲಕ ಹಿರಣ್ಯಕೇಶಿ ನದಿ ನೀರಿನಲ್ಲಿ ಹುಡುಕಾಡ ನಡೆಸಿದ್ದಾರೆ.
ಆದರೆ ಬುಧವಾರ ಮಧ್ಯಾಹ್ನ ವರೆಗೆ ಮಗನ ಶವವು ಪತ್ತೆಯಾಗಿಲ್ಲ. ಈ ಬಗ್ಗೆ ಮೃತಳ ಪತಿ ತಾನು ಕೆಲಸಕ್ಕೆ ಹೋದಾಗ ಈ ದೂರವಾಣಿ ಕರೆ ಮಾಡಿದ್ದೆ, ಆದರೆ ಅವರು ಕರ ಸ್ವೀಕರಿಸಲಿಲ್ಲ. ಅದಕ್ಕಾಗಿ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಪತ್ನಿ,ಮಗ ಇರಲಿಲ್ಲ ಬಳಿಕ ತಮಗೆ ಸಂಜೆ ನೀರಲ್ಲಿ ಬಿದ್ದಿರುವ ವಿಷಯ ತಿಳಿಯಿತು ಎಂದು ಮಾಧ್ಯಮದವರ ಮುಂದೆ ಹೇಳಿದರು.




Space for Advertisement